📞 +91 9686347704, 9900425111
Chalo Mandir logo
ಚಲೋ ಮಂದಿರ್
ಉಜ್ವಲ ಭವಿಷ್ಯಕ್ಕಾಗಿ
← ಸಂಕಲ್ಪ
🛕
Temple Protection

ದೇವಾಲಯಗಳ ಸಂರಕ್ಷಣೆ

ದೇವಾಲಯಗಳ ಸಂರಕ್ಷಣೆ ಎಂದರೆ ಪುರಾತನ, ಪ್ರಸ್ತುತ ಮತ್ತು ಹೊಸದಾಗಿ ನಿರ್ಮಿಸುವ ದೇವಾಲಯಗಳ ವಾಸ್ತುಶಿಲ್ಪ, ಶಿಲ್ಪಕಲೆ, ಇತಿಹಾಸ ಮತ್ತು ಪಾವಿತ್ರ್ಯತೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆ. ಕರ್ನಾಟಕದಲ್ಲಿ, ವಿಶೇಷವಾಗಿ ಬೇಲೂರು, ಹಳೇಬೀಡು, ಹಂಪಿ ಮುಂತಾದ ಕಡೆ ಇರುವ ಐತಿಹಾಸಿಕ ದೇವಾಲಯಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ.

  • ಶಿಲ್ಪಕಲೆ ರಕ್ಷಣೆ

    ದೇವಾಲಯಗಳ ಶಿಲ್ಪಗಳಿಗೆ ಧಕ್ಕೆಯಾಗದಂತೆ ರಕ್ಷಿಸುವುದು, ಪುರಾತನ ಕಲೆಗಳನ್ನು ಸಂರಕ್ಷಿಸುವುದು.

  • ಪುನರುಜ್ಜೀವನ

    ಹಳೆಯ ದೇವಾಲಯಗಳ ಜೀರ್ಣೋದ್ಧಾರ — ಅಖಿಲ ಭಾರತ ಪ್ರಾಚೀನ ದೇಗುಲಗಳ ಪುನರುಜ್ಜೀವನ.

  • ಪಾರಂಪರಿಕ ಪದ್ಧತಿ

    ಸ್ಮಾರಕಗಳ ಸಂರಕ್ಷಣೆಗೆ ಸ್ಥಳೀಯ ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಬಳಸುವುದು; ಪುರಾತತ್ವ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ಪಾಲನೆ.

  • ದತ್ತು ಯೋಜನೆ

    ಸರ್ಕಾರಿ/ಖಾಸಗಿ ಸಂಸ್ಥೆಗಳು ದೇವಾಲಯಗಳನ್ನು ದತ್ತು ಪಡೆದು ನಿರ್ವಹಣೆ ಮಾಡುವ ವ್ಯವಸ್ಥೆ.

  • ಪುರಾತತ್ವ ಸರ್ವೇಕ್ಷಣಾ ಇಲಾಖೆ

    ರಾಷ್ಟ್ರೀಯ ಮಹತ್ವದ ಸ್ಮಾರಕಗಳ ರಕ್ಷಣೆ.

ಧರ್ಮೋ ರಕ್ಷತಿ ರಕ್ಷಿತಃ

ಭಗವತ್ ಭಕ್ತರು ನಮ್ಮ ಈ ಲೋಕ ಕಲ್ಯಾಣದ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಿ.